ಹಾವೇರಿ: ಜಿಲ್ಲೆಯ ಸಿಗಾಂವ ತಾಲೂಕಿನ ತಿಮ್ಮಾಪುರದ ಬೆಳ್ಳಿಗಟ್ಟಿ ಗ್ರಾಮದ ಬಳಿ ಎರೆಡು ಕಾರುಗಳ ಮದ್ಯ ಅಪಘಾತ ಸಂಭವಿಸಿ ನಾಲ್ಕು ಜನರು ಸಾವನ್ನಪ್ಪಿದ ಘಟನೆ ನಡೆದಿದೆ.
ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಬಿಳಿ ಬಣ್ಣದ ಮಹೀಂದ್ರ ಎಕ್ಸ್ ಯುವಿ 700 ವಾಹನವು ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಹುಬ್ಬಳ್ಳಿ ಕಡೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕೆಂಪು ಬಣ್ಣದ ಟಾಟಾ ಆಲ್ಕ್ರೋಜ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಲ್ಟ್ರೋಜ್ ಕಾರಿನಲ್ಲಿ 10-12 ವರ್ಷದ ಮಗು ಸೇರಿದಂತೆ 4 ಜನರಿದ್ದರು, ಅವರೆಲ್ಲರೂ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, 2 ಜನರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತರು ಚಂದ್ರಮ್ಮ 59 ವರ್ಷ, ಚಾಮರಾಜಪೇಟೆ, ಬೆಂಗಳೂರು ನಿವಾಸಿ, ಮೀನಾ ವಯಸ್ಸು 38 ವರ್ಷ ಹರಿಹರ ನಿವಾಸಿ, ಮಹೇಶ್ ಕುಮಾರ್ ಸಿ, ವಯಸ್ಸು 41 ವರ್ಷ, ಸಾ-ಹರಿಹರ ನಿವಾಸಿ ಹಾಗೂ ಧನ್ವೀರ್ ವಯಸ್ಸು 11 ವರ್ಷ ಹರಿಹರ ನಿವಾಸಿ ಎಂದು ತಿಳಿದುಬಂದಿದೆ.
ಇವರು ಹುಬ್ಬಳ್ಳಿಯಿಂದ ದಾವಣಗೆರೆ ಕಡೆಗೆ ಹೋಗುತ್ತಿದ್ದಾಗ ಟಾಟಾ ಆಲ್ಟ್ರೋಜ್ ರೆಡ್ ಕಲರ್ ಕಾರು ಸಂಖ್ಯೆ KA05 NC 4963. ತಿಮ್ಮಾಪುರ ಬಳಿಯ ಎನ್ಎಚ್ 48 ರಸ್ತೆಯಲ್ಲಿ ಟಾಟಾ ಮಹೀಂದ್ರಾ 700 ಬಿಳಿ ಬಣ್ಣದ ಕಾರು ಸಂಖ್ಯೆ-ಎಂಎಚ್ 09 ಜಿಯು 3097 ಮಹೀಂದ್ರಾ ಎಕ್ಸ್ಯುಯು 700 ರಸ್ತೆ ವಿಭಜಕವನ್ನು ದಾಟಿ ಹುಬ್ಬಳ್ಳಿ ಕಡೆಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. XUV ಕಾರಿನಲ್ಲಿದ್ದವರು ಎಸ್ಕೇಪ್ ಆಗಿದ್ದಾರೆ.ಸ್ಥಳಕ್ಕೆ ತಡಸ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.