ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಬಿಜೆಪಿ ಮಹಾನಗರ ಜಿಲ್ಲಾ ಯುವ ಮೋರ್ಚಾ ಗೆ ನೂತನ ಅಧ್ಯಕ್ಷರನ್ನಾಗಿ ಪ್ರೀತಮ್ ಅರಕೇರಿ ಅವರನ್ನ ಆಯ್ಕೆ ಮಾಡಿ ಬಿಜೆಪಿ ಜಿಲ್ಲಾ ಘಟಕ ಆದೇಶ ಮಾಡಿದೆ.

ಕಳೆದ ಹಲವು ವರ್ಷಗಳಿಂದ ಪಕ್ಷದಲ್ಲಿ ಕಾರ್ಯಕರ್ತರಾಗಿ ನಿಷ್ಠಾವಂತ ಸೇವೆ ಸಲ್ಲಿಸುತ್ತಿರುವ ಪ್ರೀತಮ್ ಅವರ ಸೇವೆ ಗುರುತಿಸಿ, ಯುವ ಮೊರ್ಚಾದ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳನ್ನಾಗಿ ಮಂಜುನಾಥ ಹೆಬಸೂರು ಹಾಗೂ ಶಕ್ತಿ ಹಿರೇಮಠ ಅವರನ್ನ ನೇಮಕ ಮಾಡಿ ಜಿಲ್ಲೆಯ ಮತ್ತಷ್ಟು ಜವಾಬ್ದಾರಿಗಳನ್ನ ಅವರಿಗೆ ವಹಿಸಿದೆ.

ಇನ್ನು ಪಕ್ಷ ನೀಡಿದ ಗುರುತರ ಜವಾಬ್ದಾರಿಯನ್ನ ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸುವ ಭರವಸೆ ನೀಡಿದ್ದಾರೆ. ಅಲ್ದೇ ಪಕ್ಷ ನೀಡಿದ ಈ ಜವಾಬ್ದಾರಿಯನ್ನ ಅತ್ಯಂತ ಸಂತೋಷದಿಂದ ಸ್ವೀಕಾರ ಮಾಡಿ ನಿಷ್ಠಾವಂತ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುವ ವಾಗ್ಧಾನ ಮಾಡಿದ್ದಾರೆ.
ಇನ್ನು ಪಕ್ಷದಿಂದ ಪ್ರೀತಂ, ಮಂಜುನಾಥ ಹಾಗೂ ಶಕ್ತಿ ಅವರನ್ನ ಈ ಗುರುತರ ಸ್ಥಾನಕ್ಕೆ ನೇಮಕ ಮಾಡಿದ ಹಿನ್ನೆಲೆ ಪಕ್ಷದ ಹಾಗೂ ಅವರ ಹಿತೈಶಿಗಳಿಂದ ಅಭಿನಂದನೆ ವ್ಯಕ್ತವಾಗುತ್ತಿದೆ.