ಹುಬ್ಬಳ್ಳಿ: ನಗರದ ಚಾಣಕ್ಯಪುರಿ ಪೊಲೀಸ್ ಕ್ವಾಟರ್ಸ್ ಹಾಗೂ ಸಿ.ಎ.ಆರ್ ಮೈದಾನ ಬಳಿಯ ಪೊಲೀಸ್ ಸಿಬ್ಬಂದಿಗಳ ಮನೆಗಳಿಗೆ ಕಳ್ಳರು ನುಗ್ಗಿ ಬಂಗಾರ, ಬೆಳ್ಳಿ ಆಭರಣ ಹಾಗೂ ನಗದು ಸೇರಿ ₹2.5 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಯಲ್ಲಪ್ಪ ದೊಡಮನಿ ಅವರು ಚಾಣಕ್ಯಪುರಿ ಪೊಲೀಸ್ ಕ್ವಾಟರ್ಸ್ನಲ್ಲಿ ವಾಸವಿದ್ದು, ಜುಲೈ 17ರಂದು ಮಧ್ಯಾಹ್ನ 12.30ಕ್ಕೆ ಮನೆಗೆ ಬೀಗ ಹಾಕಿ ಸ್ವಗ್ರಾಮಕ್ಕೆ ತೆರಳಿದ್ದರು. ಜುಲೈ 19ರಂದು ಸಂಜೆ 7 ಗಂಟೆಗೆ ಹಿಂದಿರುಗಿದಾಗ ಮನೆಗೆ ಕಳ್ಳರು ನುಗ್ಗಿ ಕಳ್ಳತನ ಮಾಡಿರುವ ವಿಚಾರ ಗೊತ್ತಾಗಿದೆ.
ಕಳ್ಳರು ಬಾಗಿಲಿನ ಬೀಗ ಮುರಿದು ಒಳಗೆ ಪ್ರವೇಶಿಸಿ, ಮನೆಯ ಹಿಂಭಾಗದ ಬೆಡ್ರೂಮ್ನಲ್ಲಿ ಇದ್ದ ಟ್ರೆಜರಿ ಲಾಕ್ ಅನ್ನು ಅಲ್ಲಿಯೇ ಸಿಕ್ಕ ಚಾವಿಯಿಂದ ಲಾಕರ್ ತೆಗೆದು 40 ಗ್ರಾಂ ಬಂಗಾರದ ಆಭರಣ, 100 ಗ್ರಾಂ ಬೆಳ್ಳಿಯ ಆಭರಣ ಹಾಗೂ ₹40,000 ನಗದು ಕಳವು ಮಾಡಲಾಗಿದೆ. ಈ ಮೂಲಕ ಒಟ್ಟು ಕಳವಾದ ಆಸ್ತಿಯ ಮೌಲ್ಯ ಸುಮಾರು ₹2,50,000 ಎಷ್ಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
https://www.instagram.com/reel/DMVblOqy0dk/?igsh=Njc0Z28yb243amdt
ಇದೇ ವೇಳೆ, ಸಿ.ಎ.ಆರ್ ಮೈದಾನದ ಹತ್ತಿರವಿರುವ ಪೊಲೀಸ್ ಕ್ವಾಟರ್ಸ್ ನಲ್ಲಿ ವಾಸಿಸುತ್ತಿರುವ ಸುನೀಲಕುಮಾರ ಲಂಬಾಣಿ ಅವರ ಮನೆಯಲ್ಲಿ ಸಹ ಇದೇ ರೀತಿಯ ಕಳ್ಳತನ ನಡೆದಿದೆ. ಇಲ್ಲಿ ಸಹ ಬಂಗಾರ ಹಾಗೂ ಬೆಳ್ಳಿಯ ಆಭರಣಗಳು ಕಳ್ಳತನವಾಗಿದೆ.
ಈ ಸಂಬಂಧ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಹಾಗೂ ಶಂಕಿತರ ವಿಚಾರಣೆ ಮುಂದುವರೆದಿದೆ. ನಿವಾಸಿಗಳ ನಡುವೆ ಭಯದ ವಾತಾವರಣ ತಲೆದೋರಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರಿಗೆ ಪೊಲೀಸರು ಆಗ್ರಹಿಸಿದ್ದಾರೆ.