ಧಾರವಾಡ: ಆಗಸ್ಟ್ 15ರಂದು ಮನೆಯಲ್ಲಿ ಕುಪ್ಪಡಿಗೆಗೆ ಥಿನ್ನರ್ ಹಾಕುವ ವೇಳೆ ಬೆಂಕಿ ಅವಘಡ ಉಂಟಾಗಿತ್ತು. ಈ ಸಂದರ್ಭದಲ್ಲಿ 4 ವರ್ಷದ ಬಾಲಕ ಅಗಸ್ತ್ಯ ಬೆಂಕಿಗೆ ಆಹುತಿಯಾಗಿ ಅಂದೇ ಮೃತಪಟ್ಟಿದ್ದ. ತನ್ನ ಮಗನನ್ನು ರಕ್ಷಿಸಲು ಹೋಗಿದ್ದ ತಂದೆ ಚಂದ್ರಕಾಂತ ಮಾಶ್ಯಾಳ (35) ಗಂಭೀರವಾಗಿ ಗಾಯಗೊಂಡಿದ್ದರು.
60% ಸುಟ್ಟ ಗಾಯಗಳಾದ ಚಂದ್ರಕಾಂತ ಕಳೆದ ಮೂರು ದಿನಗಳಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಚಂದ್ರಕಾಂತನ ಪತ್ನಿ ಸುಶ್ಮಿತಾ ಇತ್ತೀಚೆಗೆ ಹೆರಿಗೆಗೊಂಡಿದ್ದು, ಕೇವಲ ಒಂದು ತಿಂಗಳ ಬಾನಂತಿಯಾಗಿದ್ದಾರೆ. ಮಗ ಹಾಗೂ ಪತಿಯನ್ನೂ ಕಳೆದುಕೊಂಡ ಪರಿಣಾಮ ಕುಟುಂಬ ದುಃಖದಲ್ಲಿ ಮುಳುಗಿದೆ.