ಹುಬ್ಬಳ್ಳಿ: ರಾಜ್ಯ ಪೊಲೀಸ್ ಇಲಾಖೆಯು ಭಾರೀ ಪ್ರಮಾಣದ ವರ್ಗಾವಣೆ ಆದೇಶವನ್ನು ಹೊರಡಿಸಿದ್ದು, ರಾಜ್ಯದ ಅನೇಕ ಪೊಲೀಸ್ ಠಾಣೆಗಳ ಇನ್ಸ್ಪೆಕ್ಟರ್ಗಳನ್ನು ವರ್ಗಾಯಿಸಲಾಗಿದೆ. ಹುಬ್ಬಳ್ಳಿ – ಧಾರವಾಡ ಅವಳಿ ನಗರದಲ್ಲಿಯೂ ಈ ವರ್ಗಾವಣೆಯ ಅಲೆ ತಲುಪಿದೆ.

ಅವಳಿ ನಗರದ ಪ್ರಮುಖ ಠಾಣೆಗಳಾದ ವಿದ್ಯಾನಗರ, ಗೋಕುಲ್ ರೋಡ್, ಉಪನಗರ, ಸಂಚಾರಿ ಠಾಣೆ ಹಾಗೂ ಧಾರವಾಡ ನಗರ ಠಾಣೆ ಸೇರಿದಂತೆ ಹಲವು ಠಾಣೆಗಳ ಪಿಐಗಳ ವರ್ಗಾವಣೆ ಆದೇಶ ಹೊರಬಿದ್ದಿದೆ.

ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶ:

ಎಲ್ಲ ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ಲೋಕಾಯುಕ್ತ ವಿಭಾಗಗಳಿಗೆ ವರ್ಗಾಯಿಸುವಂತೆ ಆದೇಶ ನೀಡಲಾಗಿದೆ. ವಿದ್ಯಾನಗರ ಠಾಣೆಯ ಪಿಐ ಜಯಂತ್ ಗೌಳಿ ಲೋಕಾಯುಕ್ತ ವಿಭಾಗಕ್ಕೆ ವರ್ಗಾವಣೆ, ಗೋಕುಲ್ ರೋಡ್ ಠಾಣೆಯ ಪಿಐ ಪ್ರವೀಣ್ ನೀಲಮ್ಮನವರ್ ಲೋಕಾಯುಕ್ತ ಎಸ್ಐಟಿ ವಿಭಾಗಕ್ಕೆ ವರ್ಗಾವಣೆ, ಉಪನಗರ ಠಾಣೆಯ ಪಿಐ ಮಲ್ಲಪ್ಪ ಹೂಗಾರ್ ರಾಜ್ಯ ಗುಪ್ತವಾರ್ತೆ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.

ಇನ್ನು ಧಾರವಾಡ ನಗರ ಠಾಣೆಯ ಪಿಐ ನಾಗಯ್ಯ ಕಾಡದೇವರಮಠ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಠಾಣೆಗೆ ವರ್ಗಾವಣೆ, ಹುಬ್ಬಳ್ಳಿ ಪೂರ್ವ ಸಂಚಾರಿ ಠಾಣೆಯ ಜಾಕ್ಸನ್ ರಾಬರ್ಟ್ ಡಿಸೋಜಾ ಅವರನ್ನು ವಿದ್ಯಾನಗರ ಠಾಣೆಗೆ ವರ್ಗಾಯಿಸಿ ಆದೇಶಿಸಲಾಗಿದೆ.

ಈ ವರ್ಗಾವಣೆ ಆದೇಶದೊಂದಿಗೆ ಹುಬ್ಬಳ್ಳಿ–ಧಾರವಾಡ ಪೊಲೀಸ್ ಇಲಾಖೆಯಲ್ಲಿ ಹೊಸ ಚಲನಶೀಲತೆ ಆರಂಭವಾಗುವ ಸಾಧ್ಯತೆಯಿದೆ.