ಹುಬ್ಬಳ್ಳಿ: ಇದು KPV ನ್ಯೂಸ್ ಬಿಗ್ impact,
ಹೌದು, ಕಳೆದ ಎರಡು ದಿನಗಳ ಹಿಂದೆ ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯನ್ನು ಯುವಕರಿಬ್ಬರು ಬೈಕ್ ನಲ್ಲಿ ಫಾಲೋ ಮಾಡಿ ಚುಡಾಯಿಸಿದ್ದರು. ಈ ಘಟನೆಯ ಕುರಿತು ನಿಮ್ಮ KPV ನ್ಯೂಸ್ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಇಟ್ಟುಕೊಂಡು ಸುದ್ದಿ ಬಿತ್ತರ ಮಾಡಿತ್ತು.

ಈ ಮೂಲಕ ಅವಳಿನಗರದಲ್ಲಿ ಮಹಿಳೆಯರಿಗೆ ರಕ್ಷಣೆಯಿಲ್ಲವೇ? ಪೊಲೀಸ್ ಇಲಾಖೆ ಮಹಿಳೆಯರಿಗೆ ರಕ್ಷಣೆ ನೀಡುವ ಕಾರ್ಯ ಮಾಡಬೇಕೆಂದು ಪೊಲೀಸ್ ಕಮಿಷನರ್ ಗಮನಕ್ಕೆ ತರಲಾಗಿತ್ತು. ಇದೀಗ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಹಳೇಹುಬ್ಬಳ್ಳಿ ಠಾಣೆಯ ಪೊಲೀಸರು ಕಮಿಷನರ್ ಮಾರ್ಗದರ್ಶನದಲ್ಲಿ ಅಪ್ರಾಪ್ತ ಬಾಲಕಿಯನ್ನು ಚುಡಾಯಿಸಿದ ಪುಂಡರನ್ನು ಬಂಧಿಸಿದ್ದಾರೆ.

ಈ ವೇಳೆ ತನಿಖೆ ನಡೆಸಿದಾಗ ಮತ್ತೆ ಮೂವರು ಆರೋಪಿಗಳು ಈ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ಬಾಯಿ ಬಿಟ್ಟಿದ್ದಾರೆ.ಸದ್ಯ ಚುಡಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಜನರನ್ನು ಬಂಧಿಸಿರುವ ಹಳೇಹುಬ್ಬಳ್ಳಿ ಪೊಲೀಸರು ಬಂಧಿತರಿಂದ ಆರು ಮೊಬೈಲ್ ಹಾಗೂ ಒಂದು ಡಿಯೋ ಬೈಕ್’ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಮುಲಕ ಬೀದಿ ಕಾಮಣ್ಣರಿಗೆ ಖಾಕಿ ತಕ್ಕಪಾಠ ಕಲಿಸಿದೆ. ಬಂಧಿತರನ್ನು ಅಯೋಧ್ಯೆನಗರದ ನಿವಾಸಿಗಳಾದ ಶುಭಂ ತಡಸ, ಮೆಹಬೂಬ್ ಹಿತ್ತಲಮನಿ, ಸಾಗರ ಸಾತಪುತೆ, ಶ್ರೀವತ್ಸವ ಬೆಂಡಿಗೇರಿ, ಸಚಿನ ನರೇಂದ್ರ ಎಂದು ಗುರುತಿಸಲಾಗಿದೆ.
ಇನ್ನು ಶುಭಂ ತಡಸ ವಿರುದ್ಧ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಮತ್ತು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳಿವೆ. ಅಷ್ಟೇ ಅಲ್ಲದೇ ಮೆಹಬೂಬ್ ಹಿತ್ತಮಮನಿ ಮೇಲೆ ಕೂಡಾ ಪ್ರಕರಣಗಳು ದಾಖಲಾಗಿರುವುದು ಗೊತ್ತಾಗಿದೆ.ಸದ್ಯ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.