ಹುಬ್ಬಳ್ಳಿ: ಆಟೋ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್’ನಲ್ಲಿದ್ದ ಇಬ್ಬರು ಸವಾರರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನೂಲ್ವಿ ಬಳಿಯ ಗರಂಫುಲ್ ಬಳಿಯಲ್ಲಿ ನಡೆದಿದೆ.
ಗಾಯಗೊಂಡವರನ್ನು ಜಾಹಿರ್, ಅಬ್ದುಲ್ ಎಂದು ಗುರುತಿಸಲಾಗಿದ್ದು, ಆಕಳಿನ ಬೆನ್ನೆಯನ್ನು ತೆಗೆದುಕೊಂಡು ಅಕ್ಕನ ಮನೆಗೆ ಹೋಗುತ್ತಿದ್ದಾಗ ಈ ಒಂದು ದುರ್ಘಟನೆ ನಡೆದಿದೆ.
ಇನ್ನು ಅದರಗುಂಚಿಯಿಂದ ನೂಲ್ವಿಯತ್ತ ಹೋಗುತ್ತಿದ್ದ ಬೈಕ್’ಗೆ ನೂಲ್ವಿಯಿಂದ ಅದರಗುಂಚಿಯತ್ತ ಬರುತ್ತಿದ್ದ ಆಟೋ ನಡುವೆ ಅಪಘಾತ ಸಂಭವಿಸಿದ್ದು, ಆಟೋ ಚಾಲಕನ ಅತಿಯಾದ ವೇಗವೇ ಡಿಕ್ಕಿಗೆ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸದ್ಯ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಗಾಯಗೊಂಡವರನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.