ಹುಬ್ಬಳ್ಳಿ: ಜನರ ಜೀವನ ಸುಗಮಗೊಳಿಸಲು ಎಸ್.ಪಿ.ಫೌಂಡೇಷನ್ ನವಲಗುಂದ ಪಟ್ಟಣದಲ್ಲಿ ಶನಿವಾರ ನಡೆಸಲಿರುವ ಉದ್ಯೋಗ ಮೇಳದ “ಜರ್ಸಿ”ಯನ್ನ ಪದಾಧಿಕಾರಿಗಳು ಬಿಡುಗಡೆಗೊಳಿಸಿದರು.
50ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿ, 2500 ಕ್ಕೂ ಹೆಚ್ಚು ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಎಸ್.ಪಿ.ಫೌಂಡೇಷನ್ ಉದ್ಯೋಗ ಮೇಳವನ್ನ ಹಮ್ಮಿಕೊಂಡಿದ್ದು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಸಹಕಾರ ನೀಡಿದೆ.

ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳಲು ಎಸ್ ಪಿ ಫೌಂಡೇಶನ್ ಪದಾಧಿಕಾರಿಗಳು ಮನವಿ ಮಾಡಿದ್ದಾರೆ. ದಿನಾಂಕ 8-02-2025 ಶನಿವಾರ ಬೆಳಿಗ್ಗೆ 10 ರಿಂದ 4 ಗಂಟೆಯವರೆಗೆ ಉದ್ಯೋಗ ಮೇಳ ನಡೆಯಲಿದ್ದು ಹೆಚ್ಚಿನ ಮಾಹಿತಿಗಾಗಿ 8197596955, 8453208555 ನಂಬರಗಳಿಗೆ ಸಂಪರ್ಕಿಸಲು ಕೋರಲಾಗಿದೆ.
ರಾಜಶೇಖರ ಕಂಪ್ಲಿ, ಸದಾನಂದ ಗಾಳಪ್ಪನವರ, ರೋಹಿತ ಮತ್ತಿಹಳ್ಳಿ, ಪ್ರಭು ಬುಳಗಣ್ಣನವರ, ಮುತ್ತು ಚಾಕಲಬ್ಬಿ, ರವಿಚಂದ್ರನ್ ಹುಬ್ಬಳ್ಳಿ, ಗಂಗಾಧರ ದುಂದೂರ, ವೀರೇಶ ಮಡಿವಾಳರ ಜರ್ಸಿ ಬಿಡುಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.