ಹುಬ್ಬಳ್ಳಿ: ಬಡ್ಡಿ ಹಣ ನೀಡಿ ಯುವಕನನ್ನು ವಸೂಲಿಗೆ ಚೂ ಬಿಟ್ಟು ಯುವತಿಯನ್ನು ಗರ್ಭಿಣಿ ಮಾಡಿ ಜೈಲು ಪಾಲಾದ ಲೋಫರ್ ಶಾನ್ವಾಜ್ ಪ್ರಕರಣದಲ್ಲಿ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೊನ್ನೆಯಷ್ಟೇ ಅಪ್ರಾಪ್ತ ಯುವತಿಯ ಬಾಳು ಹಾಳು ಮಾಡಿ ಇತ್ತ ನ ಘರ್ ಕಾನ ಘಾಟ್ ಕಾ ಅನ್ನೋ ಹಾಗೆ ಜೈಲು ಪಾಲಾದ ಕೀಚಕನ ಸ್ಟೋರಿ ನಿಮ್ಮ ಕರ್ನಾಟಕ ಪಬ್ಲಿಕ್ ವಾಯ್ಸ್ ಸುದ್ದಿವಾಹಿನಿ ಜಗಜ್ಜಾಹೀರು ಮಾಡಿದ ಸಂಗತಿ ನಿಮಗೆಲ್ಲ ಗೊತ್ತೇ ಇದೆ.
ಇದೀಗ ಇದೇ ಬಡ್ಡಿಕೋರನ ಚೇಲಾ ಪ್ರಕರಣಕ್ಕೆ ಬಹುದೊಡ್ಡ ಟ್ವಿಸ್ಟ್ ಸಿಕ್ಕಿದೆ. ಅರೇ ಅದೇನಪ್ಪ ಟ್ವಿಸ್ಟ್ ಅಂತೀರಾ…? ಇಲ್ಲೇ ಐತಿ ನೋಡ್ರಿ ವಸೂಲಿ ಗಿರಾಕಿಗಳ ಅಸಲಿ ಕಹಾನಿ…! ಬಡ್ಡಿ ನೀಡೋ ನೆಪದಲ್ಲಿ ಬಡಜನತೆಗೆ ಟಾರ್ಚರ್ ಕೊಡೋ ಆ ಮಹಿಳೆ ಹತ್ತಿರವೇ ಬಡ್ಡಿ ಸಮೇತ ಅಸಲು ದುಡ್ಡು ಪೀಕಿದ ಗಿರಾಕಿಗಳ ಆ “MONEY ಕಹಾನಿ” ನಿಮ್ಮ ಮುಂದಿಡ್ತಿದೀವಿ…

ಎಸ್ ಮೊನ್ನೆಯಷ್ಟೇ ಯುವತಿಯೋರ್ವಳನ್ನ ತನ್ನ ಕಾಮತೃಷೆಗೆ ಬಳಸಿಕೊಂಡು ಬ್ಲ್ಯಾಕ್ ಮೇಲೆ ಮಾಡಿದ ಆರೋಪದ ಮೇಲೆ ಶಾನವಾಜ್ ಎಂಬ ಯುವಕನನ್ನ ವಿದ್ಯಾನಗರ ಪೊಲೀಸರು ಬಂಧಿಸಿ ಕಂಬಿ ಹಿಂದೆ ಅಟ್ಟಿದ್ದಾರೆ. ಆದ್ರೆ ಈ ಪ್ರಕರಣದ ಹಿಂದಿನ “MONEY ಕಹಾನಿ” ಬೇರೇನೇ ಇದೆ.
ಹೌದು ನಗರದ ಉಣಕಲ್ ನಿವಾಸಿ ಶಾಂತಾ ಚೌಹಾಣ್ ಎಂಬ ಮಹಿಳೆ ಬಳಿ ಸಾಲ ಪಡೆದಿದ್ದ ಯುವತಿಯ ಪಾಲಕರಿಂದ ಹಣ ವಸೂಲಿ ಮಾಡಲು ಶಾನವಾಜ್ ಎಂಬ ಯುವಕನನ್ನು ಛೂ ಬಿಟ್ಟಿದ್ದ ಶಾಂತಾ ಬಳಿಯೇ ಇದೀಗ ಬಡ್ಡಿ ಸಮೇತ ಅಸಲು ಹಣ ಪೀಕಿದ್ದಾರೆ ಆ ಗಿರಾಕಿಗಳು.
ಇತ್ತ ಆರೋಪಿ ಶಾನವಾಜ್ ನನ್ನ ಕಂಬಿ ಹಿಂದೆ ಕಳಿಸಿದ್ದೇ ತಡ. ಪ್ರಮುಖ ಬಡ್ಡಿ ಕುಳ ಶಾಂತಾ ಚೌಹಾಣ್ ಮನೆಯ ಕದ ತಟ್ಟಿರೋ ಆ ಕಿಲಾಡಿಗಳು ಮಾದ್ಯಮಗಳ ಸೋಗಿನಲ್ಲಿ ಹೋಗಿ ಹಣ ಪೀಕಿದ್ದಾರೆ. ರಾತ್ರೋ ರಾತ್ರಿ ಆ ನೌಟಂಕಿಗಳು ನಡೆಸಿರೋ ಆ ನೌಟಂಕಿ ಆಟವನ್ನ ನಿಮ್ಮ ಕರ್ನಾಟಕ ಪಬ್ಲಿಕ್ ವಾಯ್ಸ್ ಫ್ರೂಫ್ ಸಮೇತ ಬಿಚ್ಚಿಡುತ್ತೆ.
ಆ ವಸೂಲಿ, ನೌಟಂಕಿ ಆಟಗಾರರ ಅಸಲು ವಸೂಲಿ ಆಟದ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಹೆಸರು ಸಮೇತ ನಿಮ್ಮ ಮುಂದೆ ಬಿಚ್ಚಿಡಲಿದೆ. ನಿರಂತರ ಸುದ್ದಿಗಾಗಿ ನೋಡ್ತಾ ಇರಿ ಕರ್ನಾಟಕ ಪಬ್ಲಿಕ್ ವಾಯ್ಸ್ ….