ಹುಬ್ಬಳ್ಳಿ: L&T ಅಧಿಕಾರಿಗಳ ಯಡವಟ್ಟಿನಿಂದ L & T ಸೂಪರ್ವೈಸರ್ ಸಾವನ್ನಪ್ಪಿದ್ದು, ಇನ್ನೊಬ್ಬ ಕಾರ್ಮಿಕನ ಸ್ಥಿತಿ ಗಂಭೀರವಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಅರಳಿಕಟ್ಟಿ ಓಣಿಯಲ್ಲಿ L&T ಕಂಪನಿಯವರು ನೀರಿನ ಪೈಪ್ ಲೈನ್ ಹಾಕುವ ಕಾಮಗಾರಿ ನಡೆಸುತ್ತಿದ್ದ ವೇಳೆ, ರಸ್ತೆಯ ಮೇಲೆ ಒಡ್ಡಿದ ಮಣ್ಣು ಕೆಲಸ ಮಾಡುತಿದ್ದ L & T ಕಂಪನಿ ಸೂಪರ್ವೈಸರ್ ಮೈಮೇಲೆ ಬಿದ್ದ ಪರಿಣಾಮ ಮಣ್ಣಿನಲ್ಲಿ ಸಿಲುಕಿಕೊಂಡು ಮೃತ ಪಟ್ಟರೆ, ಜೊತೆಗಿದ್ದ ಇನ್ನೋರ್ವ ಕಾರ್ಮಿಕನ ಸ್ಥಿತಿ ಗಂಭೀರವಾಗಿದೆ..

ಅಂಜುಮನ್ ಸಂಸ್ಥೆಯ ಸದಸ್ಯ ದಾವೂದ್ ನದಾಫ್ ಹಾಗೂ ಗೆಳೆಯರ ಸಹಾಯದಿಂದ ಮಣ್ಣಿನಲ್ಲಿ ಸಿಲುಕಿಕೊಂಡು ಮೃತ ಚೇತನ್ ಹಾಗೂ ಇನ್ನೋರ್ವ ವ್ಯಕ್ತಿಯನ್ನು ಹೊರಕ್ಕೆ ತೆಗೆದು ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಉಣಕಲ್ ತಾಜನಗರ ನಿವಾಸಿ ಚೇತನ್ ಜಾಧವ್ ಮೃತ ವ್ಯಕ್ತಿಯಾಗಿದ್ದು, ಗಾಯಗೊಂಡ ಕಾರ್ಮಿಕ ಮೌಲಸಾಬ್ ಮ್ಯಾಳಗಿಮನಿ ಎಂದು ತಿಳಿದುಬಂದಿದೆ.
https://www.instagram.com/reel/DKcSrHsSmOk/?igsh=MWg0YWhha3NqOTBzMQ==
ಸ್ಥಳೀಯ ಕಾಂಗ್ರೆಸ್ ಮುಖಂಡ ಷರೀಫ್ ಅವರು ಮೃತ ಸೂಪರ್ವೈಸರ್ ಚೇತನ್ ಗೆ ಕರೆ ಮಾಡಿ ಮುಂಜಾಗೃತಾ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ, ಆದರೆ ಅಧಿಕಾರಿಗಳ ಬೇಜವಾಬ್ದಾರಿ ವಹಿಸಿದರಿಂದ ಈ ಘಟನೆ ಸಂಭವಿಸಿದೆ ಅಂತ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಪೋಲಿಸ್ ಆಯುಕ್ತ ಎನ್ ಶಶಿಕುಮಾರ ಬೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆದಿದ್ದಾರೆ. ಈ ಕುರಿತು ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಟ್ಟಿನಲ್ಲಿ ವಾರ್ಡ್ 61 ಹಾಗೂ 62 ರ ಜನರಿಗೆ ಚಿರಪರಿಚಿತವಿದ್ದ ಚೇತನ್ ಜಾಧವ್ ಅಗಲಿಕೆ ದುಃಖ ತಂದಿದೆ ಎನ್ನುತ್ತಾರೆ ವಾರ್ಡಿನ ಸಾರ್ವಜನಿಕರು.