ಹುಬ್ಬಳ್ಳಿ: ಹು-ಧಾ ಸಿಇಎನ್ ಕ್ರೈಂ ನ ನೂತನ ಎಸಿಪಿಯಾಗಿ ಶಿವರಾಜ್ ಕೆ. ಕಟಕಭಾವಿ ಅವರು ನಗರದಲ್ಲಿ ಗುರುವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಹು-ಧಾ ಅವಳಿ ನಗರದಲ್ಲಿ ಸೈಬರ್ ಕ್ರೈಂ ಹಾಗೂ ಡ್ರಗ್ಸ್ ಗಾಂಜಾ ಹಾವಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಶಿವರಾಜ್ ಕಟಕಭಾವಿ ಅವರನ್ನು ನೂತನ ಎಸಿಪಿಯಾಗಿ ಸೈಬರ್ ಎಕನಾಮಿಕ್ಸ್ ಮತ್ತು ನಾರ್ಕೋಟಿಕ್ ಕ್ರೈಮ್ಸ್ ವಿಭಾಗಕ್ಕೆ ನೇಮಕ ಮಾಡುವ ಮೂಲಕ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಈ ವೇಳೆ ಸಿಇಎನ್ ಪೋಲಿಸ ಠಾಣೆಯ ಇನ್ಸ್ಪೆಕ್ಟರ್ ಬಿ ಕೆ ಪಾಟೀಲ್ ಅವರು ನೂತನ ಎಸಿಪಿ ಅವರಿಗೆ ಹೂ ಗುಚ್ಚೆ ನೀಡುವ ಮೂಲಕ ಬರಮಾಡಿಕೊಂಡರು.