ಹುಬ್ಬಳ್ಳಿ: ರೈಲ್ವೆ ಹಳಿ ಮೇಲೆ ಯುವಕನೋರ್ವನ ಎರೆಡು ತುಂಡಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿರುವ ಘಟನೆ ನಗರದ ಎಪಿಎಂಸಿ ಅಮರಗೊಳ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
ಮೃತ ಯುವಕನನ್ನು ಕುಸುಗಲ್ ಗ್ರಾಮದ ನಿವಾಸಿ 22 ವರ್ಷದ ಸಿದ್ದಪ್ಪ ಬಾರಕೇರ ಎಂದು ತಿಳಿದುಬಂದಿದೆ. ಇದು ಆತ್ಮಹತ್ಯೆಯೋ?? ಅಥವಾ ಕೊಲೆಯೋ?? ಎಂಬ ನಿಖರ ಮಾಹಿತಿಯು ಪೋಲಿಸರ ತನಿಖೆಯ ಬಳಿಕ ತಿಳಿದುಬರಬೇಕಿದೆ.

ಸದ್ಯ ಈ ಕುರಿತಂತೆ ರೈಲ್ವೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.