ಹುಬ್ಬಳ್ಳಿ: ತಾಯಿಯ ಸಾವಿಗೆ ಮನನೊಂದು ಮಗಳು ಆತ್ಮಹತ್ಯೆಗೆ ಶರಣಾದ ಮನಕುಲಕುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ನಗರದ ಮಂಟೂರ ರಸ್ತೆಯ ನಿವಾಸಿ ರಂಜನಾ ಮಹೇಶ್ ಬಳ್ಳಾರಿ 37 ಆತ್ಮಹತ್ಯೆಗೆ ಶರಣಾದ ಮಹಿಳೆ. ಮಹಿಳೆಯ ತಾಯಿ ಕಳೆದ ಒಂಬತ್ತು ತಿಂಗಳ ಹಿಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ನಿನ್ನೆ ತಾಯಿಯ ಪುಣ್ಯತಿಥಿಯಲ್ಲಿ ಬಾಗಿಯಾಗಿ ರಂಜನಾ ಗಂಡನ ಮನೆಗೆ ವಾಪಸ್ ಆಗಿದ್ದಳು. ಕಳೆದ ಒಂಬತ್ತು ತಿಂಗಳಿಂದ ತಾಯಿಯ ಸಾವಿನ ನಂತರ ತನ್ನ ತಂದೆಯ ಒಂಟಿತನದ ಪರಿಸ್ಥಿತಿಯನ್ನು ಕಂಡ ರಂಜನಾ ಸಾವಿನ ಹಾದಿ ಹುಡುಕಿಕೊಂಡಿದ್ದಾರೆ. ಮನನೊಂದ ರಂಜನಾ ತನ್ನ ಗಂಡನ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ.
ಇನ್ನು ಮೃತ ರಂಜನಾಗೆ ಇಬ್ಬರು ಮಕ್ಕಳಿದ್ದು, ಈಗ ಆ ಮಕ್ಕಳೂ ಸಹ ತನ್ನ ತಾಯಿ ಕಳೆದುಕೊಂಡು ಅನಾಥವಾಗಿವೆ. ಒಟ್ನಲ್ಲಿ ತಾಯಿ ಪ್ರೀತಿಯನ್ನೇ ಕಳೆದುಕೊಂಡು ಸಾವನ್ನಪ್ಪಿರೋ ರಂಜನಾಳ ಮಕ್ಕಳು ತನ್ನ ತಾಯಿಯ ಪ್ರೀತಿಯನ್ನೇ ಶಾಸ್ವತವಾಗಿ ಕಳೆದುಕೊಂಡಿರುವುದು ಎಂತವರ ಕರಳು ಹಿಂದುವಂತೆ ಮಾಡಿದ್ದು ಸುಳ್ಳಲ್ಲ.
ಸದ್ಯ ಈ ಕುರಿತು ಹುಬ್ಬಳ್ಳಿ ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.