ಬ್ರೇಕಿಂಗ್ ನ್ಯೂಸ್: ಹುಬ್ಬಳ್ಳಿಯಲ್ಲಿ ನಡೆದ ಕಾರ್ ಅಪಘಾತ ಪ್ರಕರಣ ಸಂಬಂಧಿಸಿದಂತೆ, ಚಿಕಿತ್ಸೆ ಫಲಕಾರಿಯಾಗದೆ ಇನ್ನೋರ್ವ ಮಹಿಳೆ ಸಾವನ್ನಪ್ಪಿದ್ದಾರೆ.
ಮೃತ ಪಟ್ಟವರನ್ನು ಲಿಂಗರಾಜ್ ನಗರ ನಿವಾಸಿಗಳಾದ ಒಂದೇ ಕುಟುಂಬದ ಸದಸ್ಯರಾದ ಸುಜಾತಾ ಹಿರೇಮಠ್ (61), ಶಂಕುತಲಾ ಹಿರೇಮಠ್ (75), ಸಂಪತ್ ಕುಮಾರಿ ಹಿರೇಮಠ್ (60) ಹಾಗೂ ಗಾಯತ್ರಿ ಹಿರೇಮಠ್ (65) ಎಂದು ತಿಳಿದುಬಂದಿದೆ. ಗಾಯಗೊಂಡ ವ್ಯಕ್ತಿ ವೀರಬಸಯ್ಯ (69) ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದಲ್ಲಿ ಮೃತಪಟ್ಟವರ ದೇಹಗಳನ್ನು ಕಿಮ್ಸ್ ಆಸ್ಪತ್ರೆಗೆ ತರಲಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ..