ಹುಬ್ಬಳ್ಳಿ: ಸಿಲಿಂಡರ್ ಸ್ಪೋಟಗೊಂಡು ಘಟನೆಗೆ ಸಂಬಂಧಿಸಿದಂತೆ ಮೂವರು ಯುವಕರ ಪೈಕಿ ಗಂಭೀರವಾಗಿ ಗಾಯಗೊಂಡ ಓರ್ವ ಯುವಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.

ರಾಜಸ್ಥಾನ ಮೂಲದ ಸುಭಾಷ್ ಮೋಹನ್ ರಾವ್ (26) ಸಾವನ್ನಪ್ಪಿದ ವ್ಯಕ್ತಿ. ಗಾಮನಗಟ್ಟಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ವ್ಯಕ್ತಿ. ಅಡುಗೆ ಮಾಡುವ ಸಮಯದಲ್ಲಿ ಅನಿಲ ಸೋರಿಕೆಯಿಂದಾಗಿ ಗ್ಯಾಸ್ ಸಿಲೆಂಡರ್ ಸ್ಫೋಟಗೊಂಡ ದೇಹದ ಶೇಕಡಾ 60 ರಷ್ಟು ಭಾಗ ಸುಟ್ಟು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಇನ್ನುಳಿದ ಅಶೋಕ್ ಹಾಗೂ ಮಾಂಗಿಲಾಲ್ ಎಂಬುವರೂ ಪ್ರಾಣಾಪಾಯದಿಂದ ಪಾರಾಗಿದ್ದು, ಕುಟುಂಬಸ್ಥರು ಅವರನ್ನು ರಾಜಸ್ಥಾನಕ್ಕೆ ಕರೆದೊಯ್ದಿದ್ದಾರೆ. ಘಟನೆ ಕುರಿತು ಎಪಿಎಂಸಿ ನವನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.